Wednesday, June 20, 2007

Manthana

Monday to Friday, 10PM.

THE best serial i have seen in my life. You may recognize the director S.N.Sethuram (not Seetaram) who had acted in Seetaram's earlier serials, ya the short, pure-white-haired, smiling person.
One would wonder how Sethuram got so much depth in his scripts,dialogues. He seems like a genius to me, to be able to understand, analyse and express relationships. Many conversations are like lessons. Some would make you go down on your knees. We have now started audio-recording of the sessions from episode 50 onwards. I feel bad that i missed out on the earlier gems!

Some quotes :

72-1: Reddy to his servant Appajappa
ಅಪ್ಪಜಪ್ಪ, ವಿದ್ಯಾ ಅಂತ ವಂದ್ ಇಲ್ಲ, ಬುದ್ಧಿವಂತ ಅನ್ಕೊಂಡಿದ್ದೆ. ವಿದ್ಯಾವಂತರ್ ಜೊತೆ ಸೇರಿ ಸೇರಿ, ದಡ್ಡ ಆಗ್ಬಿಟ್ಟವ್ನೆ!

72-1: Reddy to Karibasappa
Income Tax Peon ಕರಿಬಸಪ್ಪ ಬೇಕು. ಬರೀ ಕರಿಬಸಪ್ಪ ತಕ್ಕೊಂಡ್ ನಾವೆನ್ ಮಾಡೊಣ! ಮಾರಮ್ಮನ್ ಗುಡಿ ಪೂಜಾರಪ್ಪ...ದ್ಯಾವಿ ಮೈ ಮಾಲೆ ಬರ್ತಾಳೆ, ಹೊಗಿ ಕಾಲಿಗ್ ಬೀಳ್ತೀವಿ, ನೈವೇದ್ಯ ಮಾಡ್ತೀವಿ... ಮಾರಮ್ಮ ತಿನ್ನಕ್ಕಿಲ್ಲ, ಪೂಜಾರಪ್ಪ ತಿಂತಾನೆ. ಆದರೇ ಮಾರಮ್ಮಂಗೆ ಕೊಟ್ಟಿದ್ದು, ಪೂಜಾರಪ್ಪಂಗ್ ಅಲ್ಲ! ತಿಳ್ಕ!

74-1: Reddy

ಸತ್ಯ ಹೇಳ್ಬಾರದು, ಒಂದ್ ಕಿತ ಹೇಳಿದ್ರೆ, ಅದನ್ನೆ ಮುಂದಕ್ಕೆ ಹೇಳ್ತಾ ಇರಬೇಕು. ಆಗಲೇ, ಜನ ನಮ್ಮನ್ನ ಸತ್ಯವಂತರು ಅಂತ ನಂಬೊದು! ಇಷ್ಟರ್ ಮ್ಯಾಲೆ, ನೀವ್ ಸತ್ಯ ಹೇಳಿ, ಸುಳ್ ಹೇಳಿ, ಜನಕ್ಕೆ ಏನ್ ಬೇಕೊ ಅದನ್ನ ಮಾತ್ರ ಅವರು ನಂಬೊದು.

74-1:
Professor : "ಬಹಳ ವಿಷಯ ತಿಳ್ಕೊಂಡಿದೀರಿ..."
Reddy : "Educationnu!...SSLC ಗೆ ನಿಲ್ಲಿಸಿಬಿಟ್ಟೆ ನೋಡಿ, ಅದೆ ನಮ್ಮ ಅಪ್ಪಜಪ್ಪ ಹೇಳ್ತಾ ಇರ್ತಾರೆ..ಯೆಜಮಾನರೆ, ನೀವು college ಗೆ ಹೊಗದಲೆ ಇರೋದೆ ಒಳ್ಳೇದ್ ಅಯ್ತು, ಹೋಗಿದ್ದಿದ್ದರೆ ಅಲ್ಲಿ ಹೇಳ್ಕೊಟ್ಟಿದ್ದನ್ನ ಮಾತ್ರ ಕಲೀತಾ ಇದ್ದಿರಿ, ಈಗ ಹೋಗಲಿಲ್ಲವಲ್ಲ, ತಿಳ್ಕೊಂಡಷ್ಟು!"

74-1: Reddy on complicating a income tax case
ಈಗ road ಇದ್ದಂಗೆ, ಸೀದ ಒಂದೆ road ಇತ್ತಾ, quality ಚೆನ್ನಗಿತ್ತಾ..ಒಂದೆ speedನಾಗೆ ಹೋಯ್ತದೆ, accident ಆಯ್ತದೆ. ಅದಕ್ಕೆ, road ಏಕ ಸೀದ ಒಂದೆ ಇರಕ್ಕಿಲ್ಲ್ರ.. ಅಲ್ಲಲ್ಲಿ road humps, accident ಕಮ್ಮಿ ಆಗ್ಲಿ ಅಂತ. Quality ಕೆಟ್ಟದಾಗಿತ್ತಾ, ಕಾಸ್ ಉಳೀತು, steel ಕಮ್ಮಿ, accident ಕಮ್ಮಿ.

74-2: Reddy talking about husband and wife
ಕಲ್ಲೊಂದ್ ದಿಕ್ಕು, ಮರಳ್ ಒಂದ್ ದಿಕ್ಕು, cement ಇನ್ನೆಲ್ಲೋ! concreet ಹೆಂಗ್ ಆಯ್ತದೆ!

74-2: Reddy
ಬುದ್ಧಿವಂತರು! ಇವರಿಗೆ ಪೋಲಿಸು, ಕಾನೂನು, ಕೋರ್ಟು, ಕಚೇರಿ ಅಂತ ತೋರಿಸಿದ್ರೆ ಓಡಾಡ್ಕೊಂಡ್ ಇರ್ತಾರೆ, ಓಡಾಡ್ಕೊಂಡ್ ಇರಲಿ ಬಿಡು..ತೆಳ್ಳಗೆ whisky ಕುಡ್ಕೊಂಡು ನಾವ್ ಮಲ್ಲಿಕ್ಕೊಳ್ಳೊಣ ಬಾ

74-3:
Shruti : "ಕಳ್ಳನ ಮಗಳನ್ನ ಮದುವೆ ಆಗ್ತಿದೀಯ"
Praveena: "ಇದರಲ್ಲಿ ಅವಳ ತಪ್ಪು ಇಲ್ಲವಲ್ಲ!"
Shruti : "ತ್ಯಾಗ ಅನ್ನೋದು ಇದಕ್ಕೆ. ಅದರ ಫಲಾನುಭವಿ ನಾನು. ಬದುಕಿನುದ್ದಕ್ಕೂ ಗೊತ್ತೊ ಗೊತ್ತಿಲ್ಲದೆ ನೊ ನೀನು ಅದನ್ನ ಆಡಿ ತೋರಿಸ್ತಿಯ, ಇಲ್ಲ ಮಾಡಿ ತೋರಿಸ್ತಿಯ. ಋಣದಲ್ಲಿ ಬದುಕೋದು ಕಷ್ಟ, ಋಣಿಯಾಗಿ ಬದುಕೋದರಲ್ಲಿ ಸುಖ ಎಲ್ಲಿರುತ್ತೆ, ಸಂತೋಷ ಎಲ್ಲಿರುತ್ತೆ? ಅಪ್ಪ, ಅಮ್ಮನ್ನ ಬಿಟ್ಟು ಬಾ-ಅಗಬಹುದು; ಇಲ್ಲ ಅಂದ್ಕೊ-ಅದ್ ಕಶ್ಟ"

74-3: Shruti to her mother, comparing her useless father to her prospective husband
ಸಾಕಿದ್ದು ಕಟುಕ ನೇ ಆದ್ರು, ಕುರಿಗೆ ನಂಬಿಕೆ ಅವ್ನ್ ಮೇಲೆ ಅಲ್ವಾ? ಇದು ಕಂಡದ್ದು, ಅದು ಕಾಣದ್ದು, ಕಂಡದ್ದರಲ್ಲಿ ಸುಖ ಇಲ್ಲ, ಅದು ಸರಿ ಇಲ್ಲ...ಸರಿ. ಕಾಣದ್ದರಲ್ಲಿ, ಸುಖ ಇದೆ, ಸರಿ ಇದೆ ಅಂತ ಹೇಗ್ ನಂಬ್ಲಿ?

75-2: Kshama
ಚಿಕ್ಕ ವಯಸ್ಸಿಂದ ಅಭ್ಯಾಸ ಆಗಿದೆ aunty, ಹಠ ಮಾಡದೆ ನಂಗೆ ಏನು ಸಿಗಲ್ಲ, ಅಮ್ಮ ಇದ್ದರೆ ಮಗುಗೆ ಹಸಿವೆ ಅಯ್ತು-ಗೊತ್ತಾಗುತ್ತೆ, ಬೇರೆಯವರಿಗೆ ಹೇಗೆ ಗೊತ್ತಗುತ್ತೆ? ತಾತಂಗೆ ಹಸಿವೆ ಆದ್ರೆ ನನಗ್ ಊಟ!

75-2: Nandini
ಯಾರು ಯಾರಿಗು ಸಂಪೂರ್ಣವಾಗಿ ಅರ್ಥ ಅಗೊಲ್ಲ, ಅರ್ಥ ಮಡ್ಕೊಂಡಿದೀವಿ ಅನ್ನೋದು ಒಂದು ಅನಿಸಿಕೆ ಅಷ್ಟೆ, ಎಲ್ಲರು ನಮ್ಮ ನಮ್ಮ ಸೌಕರ್ಯಕ್ಕೆ ಎಷ್ಟು ಬೇಕೊ ಅಷ್ಟು ಮಾತ್ರ ಅರ್ಥ ಮಡ್ಕೋತೀವಿ

75-3: Shruti to her mother, after her wedding plans were broken
ಅಮ್ಮ, ಕಲೀಲಿಲ್ಲ ಬದುಕು ನಿನ್ ಮಗಳು. ಕಲೀಲಿಲ್ಲ ನಡ್ಯೋದು. ಎಷ್ಟ್ ದಿನ ಅಮ್ಮ ಆಗಿರಕ್ಕೆ ಸಾಧ್ಯ ನೊ ಅಷ್ಟ್ ದಿನ ಮಗಳಾಗ್ಬಿಡ್ತೀನಿ. ಸಾಕಾದ್ ದಿನ ಹೇಳು, ನಾನ್ ಅಮ್ಮ ಅಗ್ತೀನಿ, ನೀನ್ ಮಗಳಾಗು. ಹೇಳ್ಕೊಡ್ತೀನಿ, ನಾನ್ ಬಾಲ್ಯದಲ್ಲಿ ಕಲ್ತಿದ್ದನ್ನ, ನೀನ್ ಮರತಿದ್ದನ್ನ: ಕುಂಟೆ ಬಿಲ್ಲೆ, ಆಡೊಣ, ಆಗೊಮ್ಮೆ, ಈಗೊಮ್ಮೆ

There are just a few..will compile a bigger list in a separate location later.