Wednesday, October 02, 2013

ಹೀಗೊಂದು ಮಾತುಕತೆ!


ಮೈಸೂರಿನಿಂದ ಬೆಂಗಳೂರಿಗೆ "Sleep like a Baby" Mercedes ಬಸ್ಸು ಹೊರಡಕ್ಕೆ ನಿಂತಿತ್ತು. ರಮೇಶ್ ಮತ್ತು ಪ್ರಿಯಾರಿಗೆ ಇನ್ನೇನು ಬಸ್ಸು ಹೋರಡ್ತಿದೆ ಅನ್ನುವಾಗ್ಲೇ ಸಿಕ್ತು. ಆದ್ರೆ ಕೊನೇ ಸಾಲು ಮಾತ್ರ ಉಳಿದಿದ್ದರಿನ್ದ ಅಲ್ಲೇ ಕೂರಬೇಕಾಯ್ತು. ಹತ್ತಿರವೇ ಕುಳಿತಿದ್ದ ಸುರೇಶನಗೆ ಇವರಿಬ್ಬರನ್ನೂ ನೋಡಿ ತುಂಬಾ ಖುಷಿ.
"ಏನೋ ರಮೇಶ! ಎಷ್ಟು ದಿನ ಆಯ್ತೋ ಸಿಕ್ಕಿ! ಹೇಗಿದೀಯ!"
"ಅಕ್ಕು! ಬಾಮ್ಮಾ ಒಟ್ಟಿಗೆ ಕೂತ್ಕೊಳ್ಳೋಣ"

ಮೂವರೂ PUC ಒಟ್ಟಿಗೆ ಓದಿದವರು, ಹತ್ತಿರದ ಗೆಳೆಯರು, ಈಗಲೇ Engg ಮುಗಿಸಿ ಕೆಲಸಕ್ಕೆ ಸೇರಿ ಎರಡು ತಿಂಗಳು ಆಗಿತ್ತು.

"ಅದೇನು ಪ್ರಿಯಾ, ಬಸ್ಸಲ್ಲಿ ಬಂದುಬಿಟ್ಟಿದಿಯ?"
"ಹೌದು ಕಣೋ, 3:45 train miss ಆಯ್ತು, ತುಂಬಾ ದಿನ ಆಗಿತ್ತು ರಮೇಶ್ ಸಿಕ್ಕಿ, thought of catching up!"
"ಹೌದಪ್ಪ, ಅವಳು train party, ಅದು ಹೆಂಗಾದ್ರೂ ಆ ದೊಂಬಿಲಿ ಹೋಗ್ತಾಳೊ, ಆ ಜನ, ಆ rush! ಅಬಬ!"

"ಅದ್ ಸರಿ ಕಣ್ರೋ, ಎಲ್ಲಿದೀರೋ ನೀವು ಬೆಂಗ್ಳೂರಲ್ಲಿ? ನಾನು Brookefield ನಲ್ಲಿ PG ನಲ್ಲಿದೀನಿ"
"ನಾನು ನಮ್ಮ ಅಣ್ಣನ ಮನೇಲಿ ಇದೀನಿ, ಇಂದಿರಾನಗರದಲ್ಲಿ" ಅಂದ ಸುರೇಶ
"ನಾನು ವಿಜಯನಗರದಲ್ಲಿ, ರೂಮ್ ಮಾಡ್ಕೊಂಡು ಇದೀನಿ" - ರಮೇಶ ಮೆಲು ದನಿಯಲ್ಲಿ.

ಉದ್ಯೋಗಕ್ಕೆ ಸಂಬಂಧದ ಮಾತು ಮೊದಲು.

ಸುರೇಶ ಈ ವಿಷಯದಲ್ಲಿ ಹಿಗ್ಗಿದ್ದ - "ನನ್ನದೇನಿಲ್ಲಪ್ಪ, ಯಾವಾಗ ಬೇಕೋ ಆವಾಗ office ಗೆ ಹೋಗೋದು, ಯಾವಾಗ ಬೇಕೋ ಬರೋದು, coding ಮಾಡ್ತಾ ಇರೋದು. ಕೆಲಸ ಮುಗಿದ್ರೆ ಸಾಕು..ಅದನ್ನ ಬಿಟ್ಟು ಬೇರೆ ಯಾರು ತಲೆ ಕೆಡಿಸ್ಕೊಳಲ್ಲ.. ಮನೆಇಂದ ಕೂಡ ಕೆಲ್ಸ ಮಾಡಬಹುದು. ಆರ್ರಾಮಾಗಿದೆ !"
"ನಂದು mechanical industry, ಸುಮಾರಾಗಿ ನಡೀತಿದೆ. Rapport buildup ಮಾಡ್ಕೋತಿದೀನಿ team ನಲ್ಲಿ" ರಮೇಶ ಮುಂದುವರೆದ... "ಕಷ್ಟ ಇದೆ"
"ಅಲ್ಲ ಕಣೋ, rapport ಅಂತೆಲ್ಲಾ ಯಾಕಪ್ಪಾ ಕಷ್ಟ ಪಡಬೇಕು? ನಿನ್ನ ಪಾಡಿಗೆ ನೀ ಕೆಲಸ ಮಾಡ್ಕೊಂಡು ಹೋದ್ರಾಯ್ತು! Your work should build your image!" - ಸುರೇಶನಿಗೆ ಹೇಗೋ clarity ಇತ್ತು.
"ಆದ್ರೂ ನಿನ್ನ superiors ಗೆ ನಿನ್ನ ಬಗ್ಗೆ ಒಳ್ಳೆ impression ಬರಬೇಕಲ್ವೆನೋ?"
"ಎಂಥದ್ದೂ ಇಲ್ಲ, ನಿಮ್ಮದರಲ್ಲಿ ಹೇಂಗಿದ್ಯೋ ಗೊತ್ತಿಲ್ಲ. ನಂ office ನಲ್ಲಂತೂ ಸಕ್ಕತ್ freedom ಇದೆಯಪ್ಪಾ. You can even anytime walk up to your site head and talk to him or even have lunch with him!"
ಪ್ರಿಯಾ ಮತ್ತು ರಮೇಶನಿಗೆ ಬೆರಗು!

ಪ್ರಿಯಾ ಮುಂದಾದಳು, "ನನ್ನದೂ GE Healthcare ನಲ್ಲಿ ಚೆನ್ನಾಗಿದೆ, lab ನಲ್ಲಿ ಏನೇನೊ ಇರತ್ತೆ ಕಲಿಯಕ್ಕೆ. Coat, gloves ಎಲ್ಲ ಕೊಟ್ಟಿರುತ್ತಾರೆ. ಒಂದು ನಮ್ಮದೇ instrument ಇದೆ. ಎಲ್ಲಾ ಬೇಕಾಗಿರೋ calculations ನೆಲ್ಲಾ ಅದೇ ಮಾಡಿ ತೋರಿಸ್ತಿರತ್ತೆ. ಆ waveforms ನೆಲ್ಲಾ ನೋಡಕ್ಕೆ ಚೆನ್ನ!, ನನ್ನ CET score ನೋಡಿದ್ದ್ರೆ ನಾನು GE ಲಿ ಈ ಥರ ಕೆಲಸ ಮಾಡ್ತಿದೀನಿ ಅಂತ ನಂಬಕ್ಕೇ ಆಗಲ್ಲ"
"ಹಾಗಾದ್ರೆ ನಿಮ್ಮಲ್ಲಿ radiation protection ಸಲುವಾಗಿ shower ಎಲ್ಲಾ ಇರತ್ತಾ?" ರಮೇಶ ಅಚ್ಚರಿಯಿಂದ
"ಓ ಭಾರೀ, ಇವರದೇನು Baba Atomic research Centre, ಅದೆಲ್ಲ ಇರಕ್ಕೆ!" ಅಂತ ಸುರೇಶ ಅವನ ಬಾಯಿ ಮುಚ್ಚಿಸಿದ

"ಯಾರೂ US ಗೆ ಹೊಗ್ಲಿಲ್ವೆನ್ರೋ ನಮ್ಮ batch ಅಲ್ಲಿ?"
"ಯಾರಿದ್ರು ಅಂಥಾ genius?"
"ರಮೇಶ, ನೀನೇ ಇದೀಯಲ್ಲಾ, IQ 130 ಇಟ್ಕೊಂಡು"
"೧೨೦ - ೧೩೦ ಬರ್ತಿತ್ತು .. ಆದ್ರೆ genius ಅಲ್ಲ ಬಿಡು" - ಒಳಗೊಳಗೇ ಖುಷಿ ರಮೇಶನಿಗೆ
" ಕಲ್ಪನಾ?" "ವಿಶಾಲ್?" "ಕವಿತಾ?"
"ಕವಿತಾ ಅಂತೂ ಖಂಡಿತ genius ಅಲ್ಲ. She had so much of attitude!"
ಪ್ರಿಯಾಳಿಗೆ ಥಟ್ ಅಂತ ಹೊಳೀತು... "ಹೇ ರಮೇಶ, ಇನ್ನೊಬ್ಬಳು ಸವಿತಾ ಇದ್ದಳಲ್ಲ, what happened to her?"
"ರಮೇಶ ನದ್ದು ದೊಡ್ಡ ಕಥೆನೇ ಇದೆ ಸವಿತಾ ಜೊತೆ..ಎ ರಮೇಶ್, ಹೇಳೋ, ನಿಮ್ಮಿಬ್ಬರದ್ದು ಎನ್ ನಡೀತಿತ್ತು?"

ರಮೇಶನ ಮೈ ನವಿರೇಳಿಸುವಂತ ಕ್ಷಣಗಳವು
"College ನ ಮೊದಲನೇ ದಿನ. friends ರೇಗಿಸ್ಟಿದ್ದ್ರು... ದಮ್ ಇದ್ದರೆ ಸವಿತಾನ್ನ್ಣ ಮಾತಾಡಿಸಿಕೊಂಡು ಬಾ ಅಂತ....ನಾನು ಹೋಗಿ ಮಾತಾಡಿಸಿಕೊಂಡು ಬಂದೆ ಕೂಡ. ಅವತ್ತು class ಅಲ್ಲೇ ಕೂತಿದ್ದಾಗ ಒಂದು ಚಿಕ್ಕ paper ನ ಚೆಂಡು ಬಂದು ತಲೆಗೆ ಬಿತ್ತು. ತೆಗೆದು ನೋಡಿದ್ರೇ ಸವಿತಾ ತನ್ನ phone number ಕೊಟ್ಟಿದ್ದಳು.
ಹಾಗೆ ಮಾತಾಡಿಸಕ್ಕೆ ಶುರು ಮಾಡಿದ್ವಿ.. ಹೊರಗಡೆ ನೂ ಸಿಕ್ತಿದ್ವಿ..."
"but ಎಲ್ಲಾರು ನಿಮ್ಮಿಬ್ಬರನ್ನು ಅಣ್ಣಾ, ತಂಗಿ ಅಂತ ಕರೀತಿದ್ದ್ರಂತೆ?"
"ಅದು ಬೇರೆಯವರಿಗೆ doubt ಬರಬಾರದು ಅಂತ ನಾವೇ ಎಲ್ರಿಗೂ ಹಾಗೆ ಹೇಳಿಕೊಂಡಿದ್ದಿವಿ!..ನನ್ನ bad luck ನೋಡು... ಅವಳ birthday ಬಂತು.. ನಾನು ಅವಳಿಗೆ ಒಂದು ಹೂವಿನ bocay, chocolates ತೊಗೊಂಡು ಹೋದೆ... ನಮ್ಮ ಗುಂಪಲ್ಲೇ ಒಬ್ಬ ನಿಖಿಲ್ ಅಂತ ಜೈನರವ ಇದ್ದ... ಅವ್ನು ಅವಳಿಗೆ ಒಂದು ಕೆಂಪು sweater ಕೊಟ್ಟ (for about 600 rupees!).. ಅವತ್ತಿಂದ ನೋಡಪ್ಪ, "she just started to go out with him everywhere"
ಗಾಯದ ಮೇಲೆ ಬರೆ ಎಂಬಂತೆ ಪ್ರಿಯಾ ಕೇಲಿದಳು "ಅದೇ ಏನೋ red sweater? ಯಾವಾಗ್ಲೂ ಅದನ್ನೇ ಹಾಕ್ಕೊಂಡು ಬರೋವ್ಳು"
"ನಮ್ಮ gang ಅಲ್ಲೇ ಇಡ್ಕೊಂಡು ನನಗೇ ಚೂರಿ ಹಾಕಿದ ಮಗ!".. ನಿಖಿಲ್ ನ ಮೇಲಿದ್ದಷ್ಟು ಕೋಪ ಸವಿತಾಳ ಮೇಲಿರಲಿಲ್ಲ! ... ಹಳೇ ಪ್ರೇಯಸಿ, soft corner!
"ಹೋಗ್ಲಿ ಬಿಡೋ ರಮೇಶ, she didnt deserve you" ಸುರೇಶನ ಸಾಂತ್ವನ.
"ರಮೇಶ್, you should have gone and banged her on the face" ಪ್ರಿಯಾ ಳ ಖತರ್ನಾಕ್ idea. ಹಾಲು-ಕೆನ್ನೆ ಪ್ರಿಯಾಳಿಗೆ ಆ ಮಾತು ಹೋಲುತ್ತಿರಲಿಲ್ಲ

"ಅದಿಕ್ಕೆ, ನಮ್ಮಂಗ್ ಇದ್ದುಬಿಡಬೇಕು, ಸುಮ್ಮನ್ officeಗ್ ಹೋಗು, ಬಾ, peg ಹಾಕ್ಕೊಂಡ್ ಮಲಕ್ಕೋ..BTW ಪ್ರಿಯಾ, alcohol ತೊಗೊಂಡಿದೀಯ ಯಾವತ್ತಾದ್ರೂ?!"
"ಇಲ್ಲಪ್ಪ!"
"Try Vodka for a start! Beer ರುಚಿಯಾಗಿರಲ್ಲ..."

Interval ಎಂಬಂತೆ, ಬಸ್ಸು ಮದ್ದೂರಿನ ಬಳಿ ಒಂದು ಹಳೇ ಶಾಲೆಯ ಬಳಿ ನಿಂತುಕೊಂಡಿತು.. ರಮೇಶ, ಸುರೇಶರಿಬ್ಬರೂ ಚಕ್ಕನೆ ಇಳಿದು ಹೋದರು. ಕೆಲ ನಿಮಿಶಗಳ ಬಳಿಕ ಬಂದು ಮತ್ತೆ ಕುಂಡೂರಿದರು.
"ಎಲ್ಲಿಗ್ರೋ ಹೋಗಿದ್ರಿ?"
"ಹೇಗಪ್ಪಾ ಹೇಳೋದು..ಲೋ ರಮೇಶ, Please do the honours!"
"ಏಯ್, ಹೇಳ್ರೋ!"
"ಏನಿಲ್ಲ ಕಣೆ.. Suresh wanted to puke"

"ಪ್ರಿಯಾ, ನಿಮ್ ಕಥೆ? boyfriends, girlfriends?"
"ಪ್ರಣವ್ ಅಂತ ಅವನ ಹೆಸ್ರು. ತುಂಬಾ ಒಳ್ಳೆ ಹುಡುಗ... ಅದೇ, ನಂ tuition ನಲ್ಲಿ ಇಬ್ಬರು twins ಬರ್ತಾ ಇದ್ದಾರಲ್ಲ, ಪ್ರಣವ್, ಪ್ರತೀಕ್ ಅಂತ, ಅವರಲ್ಲಿ ದೊಡ್ಡವನು.. ಈಗ ahmedabad ನಲ್ಲಿ training ನಲ್ಲಿದಾನೆ... ಇಬ್ಬ್ಬರ ಅಮ್ಮಂದಿರಿಗೂ ಗೊತ್ತು, ಅಪ್ಪಂದಿರಿಗೆ ಹೇಳಬೇಕಿದೆ. ಅದೊಂದು ಆಗ್ಬಿಟ್ಟ್ರೇ ಸಾಕಪ್ಪ, ಆರಾಮಾಗಿದ್ದುಬಿಡಬಹುದು. Fortunately, ಅವ್ರೂ brahmins!"
"awesome...awesome.." ಸುರೇಶನ ಮೆಚ್ಚುಗೆ..."ಎನ್ fast ಇದಾಳೆ ನೋಡು ಮಗಾ, ನಾವೂ ಇದೀವಿ ದಂಡಕ್ಕೆ, ಹೋಗೋದು, ಬರೋದು, ಗುಂಡು ಹಾಕ್ಕೊಂಡ್ ಮಲ್ಗೊದು...ಇದೇ ಆಯ್ತು! ಅದ್ ಸರಿ, ಅವರಿಬ್ಬರೂ ಒಂದೇ ತರಹ ಇದ್ದರಲ್ಲವಾ? ಅವನ ತಮ್ಮ ಪ್ರತೀಕ್ ಯಾಕ್ ಇಷ್ಟ ಆಗ್ಲಿಲ್ಲ ನಿಂಗೆ ?"
 "We didn't have the vibe you know"
ಅದ್ಯಾವ vibe ಹೆಂಗಿರತ್ತೆ ಅಂತ ಮರುಗಿದರು ಇವ್ರೀಬ್ಬರೂ.

ಈಕೆ ಮುಂದುವರೆಸಿದಳು..."ಪ್ರಣವ್ ನ cousins ಕೂಡ ನನಗೆ ಚೆನ್ನಾಗಿ ಗೊತ್ತಾಗ್ಬಿಟ್ತಿದಾರೆ. Actually, ಅವರ ಜೊತೆ ನೇ ಬೆಂಗ್ಳೂರ್, ಮೈಸೂರ್ trip ಹೊಡೀತೀರ್ತೀನಿ. ಅವ್ರು ನನ್ನನ್ನ ಒಬ್ಬಳೇ ಬೇರೆ ಎಲ್ಲ್ಲೂ ಹೋಗಕ್ಕೆ ಬಿಡಲ್ಲ ಗೊತ್ತಾ! ಈ ಸರ್ತಿ ಅವರು ಬರಲಿಲ್ಲ ಅಂತ ನಾ ರೈಲಲ್ಲಿ ಬರಬೇಕಾಯ್ತು."
"ಹಾಗಾದ್ರೆ ನೀನು ಬೆಂಗ್ಳೂರಲ್ಲಿ officcu ಮನೆ ಬಿಟ್ಟು ಬೇರೆ ಎಲ್ಲೂ ಒಡಾಡೇ ಇಲ್ವಾ?" ತಲೆದೂಗಿದಳು ನಂ ಹುಡುಗಿ
"ಯಪ್ಪಾ! ಮುಂದೆ ಹೇಳು"

ಅವಳಿಗ್ಯಾಕೋ ಎಲ್ಲಿಲ್ಲದ ತವಕ ಹೇಳ್ಕೊಳಕ್ಕೆ..."Infact, ಎಷ್ಟು ಕಷ್ಟ ಗೊತ್ತಾ ಹೀಗಿರೋದು.. ಮನೆಲಿ ನಮ್ಮಿಬ್ಬರ ಬಗ್ಗೆ clear ಆದ್ರೆ US ಗೆ ಹೋಗಿ MS ಮಾಡ್ಬೇಕು ಎಂತ  plan ಮಾಡಿದೀವಿ.. ಮಕ್ಕಳ ಹೆಸ್ರು ಕೂಡ ಗೊತ್ತು ಮಾಡ್ಕೊಂಡಿದೀವಿ!"
"Awesome man! ಯಪ್ಪಾ! ಲೋ! ನಮಗೆ ನಾಳೆ ಹೆಂಗ್ ಕಳೆಯತ್ತೆ ಅಂತ ನೇ ಗೊತ್ತಿರಲ್ವಲ್ಲೋ!"
"ನಾಳೆ ಯಾಕೆ, ರಾತ್ರಿ ಎಲ್ಲಿ ಊಟ ಮಾಡ್ತೀವಿ ಅನ್ನೋದೇ ಗೊತ್ತಿರಲ್ಲ.. ಇದೆಂತ life ನಂದು.. ಒಬ್ಬಳು ಹುಡುಗಿ ನೂ ಸಿಗಲ್ಲವಲ್ಲ. " - ಸೋತಿದ್ದ ರಮೇಶ.
"ಹುಡುಗೀರು friends ಇಲ್ವಾ ನಿನಗೆ"
"ಇದಾರಪ್ಪಾ, ಆದ್ರೆ ಎಲ್ಲಾದನ್ನು share ಮಾಡಕ್ಕಾಗಲ್ಲವಲ್ಲ... you know..those intimate thoughts...she should stimulate me intellectually as well"
"ಓಹ್, ಹಾಗಾದ್ರೆ ನಿನಗೆ IQ 130 ಸುತ್ತ ಮುತ್ತ ಇರೋವ್ರನ್ನೇ ಹುಡುಕಬೇಕು...ರಮೇಶ, ನನ್ನನೇ ನೋಡೋ, ಹುಡುಗೀರಿಲ್ಲದೆ ಖುಷಿಯಾಗಿಲ್ವ?"
"ಗೊತ್ತಿಲ್ಲ ಪ, its not working for me. ಏನು ಮಾಡ್ಬೇಕೋ ಗೊತ್ತಿಲ್ಲ"
"ನೀನು ಒಂದು ಕೆಲಸ ಮಾಡು. ನಿನಗೆ girlfriend ಇಲ್ಲದೆ ಬೇಜಾರಾದಾಗ ನನ್ನನ್ನ ನೆನಪಿಸಿಕೋ" - ಅಪಾರ್ಥ ಕೊಡೊ ಉದ್ದೇಶ ಇರಲಿಲ್ಲ ಸುರೇಶನಿಗೆ
"What do you mean Suresh!" ಪ್ರಿಯಾ ಜಿಗಿದಳು
"ಅಯ್ಯೋ, ಹಾಗಲ್ಲಪ್ಪಾ ನಾ ಅಂದಿದ್ದು"

"You know what guys, you have to be relegious for girls to like you... ಪ್ರಣವ್ ಸಂಧ್ಯಾವಂದನೆ ಮಾಡದೆ ಹೋದ್ರೆ ನಾ ಅವನಿಗೆ ಬಯ್ತೇನೆ ಗೊತ್ತಾ"
"ಇದೆ ಮೊದಲ ಸಲ ಈ ಸಲಹೆ ಕೆಳ್ತಿರೊದು... ನಾವು ಹಂಗಾದ್ರೆ ದೇವಸ್ಥಾನ ಸುತ್ತು ಹೊಡೀಬೇಕು ಅಂತೀಯಾ... BTW, ನನಗೆ ಇನ್ನೂ ಪರ್ಶಂಚಾಮಿ ಹಾಕಕ್ಕೆ ಬರತ್ತೆ!"
"Tell me something Priya, Arent babies a pain?"
"Ofcourse not!, it is the most important part of our lives"
"I like kids... as long as it is somebody else's" ಮಕ್ಕಳನ್ನ ಎಲ್ಲೋ ಹತ್ತಿರವಾಗಿ ಕಂಡಂತೆ ಇತ್ತು ರಮೇಶನ ಮಾತು
"Guys, you are crazy!"

ಅಷ್ಟರೊಳಗೆ ಪ್ರಿಯಳಿಗೆ ಪ್ರಣವ್ ನ ಕರೆ ಬಂತು...".... ಇಲ್ಲೆ ಬಸ್ಸಲ್ಲಿ ಇದೀನಿ... ನಿನಗೆ PG ಗೆ ಹೋದ್ಮೇಲೆ call ಮಾಡ್ಲಾ? .... ... ..... ... ನಾನು ತಾನೇ ನಿನಗೆ first ...  ... ಆಯ್ತು, ನಿಮ್ಮಮ್ಮ first, ನಾನು second... ಒಪ್ಕೋತೀನಿ... .... " ನಡೀತಿತ್ತು ಇವರ ಮಾತುಕತೆ...

ಸುರೇಶ ರಮೇಶನ ಸೋತಿದ್ದ ಹೃದಯಕ್ಕೆ ಮುಲಾಮು ಹಚ್ಚುತ್ತಾ ಕುಂತ...


No comments: